ರಸ್ತೆಗಿಳಿಯುವವರನ್ನು ಎಚ್ಚರಿಸಲು ರಾಯಚೂರು ಪೊಲೀಸರ ಹೊಸ ಕ್ರಮ!? - Corona Effect in Raichur
ರಾಯಚೂರು: ಲಾಕ್ಡೌನ್ ನಡುವೆ ಅನಗತ್ಯ ಓಡಾಟ ನಡೆಸುವ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಲು ಆ್ಯಂಬುಲೆನ್ಸ್ನಲ್ಲಿ ಕೊರೊನಾ ಸೋಂಕಿನ ಶಂಕಿತ ಮಾದರಿ ವ್ಯಕ್ತಿಯ ಜೊತೆಗೆ ಕೂಡಿ ಹಾಕಿ ಕ್ವಾರಂಟೈನ್ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ನಗರದ ಚಂದ್ರಮೌಳೇಶ್ವರ ಸರ್ಕಲ್‌ನಲ್ಲಿ ಪೊಲೀಸರು ಈ ಪ್ರಾತ್ಯಕ್ಷಿಕೆ ನಡೆಸುವ ಮೂಲಕ ಅನಗತ್ಯವಾಗಿ ಓಡಾಡುವವರಿಗೆ ಎಚ್ಚರಿಸಲು ಮುಂದಾದರು. ಕೆಲಸವಿದ್ದರೆ ಮಾತ್ರ ಮನೆಯಿಂದ ಹೊರಗಡೆ ಬನ್ನಿ, ಇಲ್ಲದೇ ಮನೆಯಲ್ಲಿ ಇರುವಂತೆ ಮನವಿ ಮಾಡಿದರು.