ಆನೆಗಳ ದಾಳಿ ತಪ್ಪಿಸಲು ಅರಣ್ಯ ಇಲಾಖೆಯಿಂದ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ - Hassan Radio collar for elephants News
ಹಾಸನ: ಸಕಲೇಶಪುರ, ಆಲೂರು ಭಾಗದಲ್ಲಿ 50 ರಿಂದ 60 ಆನೆಗಳು ಇವೆ ಎಂದು ಅಂದಾಜಿಸಲಾಗಿದ್ದು, ಇವುಗಳ ಚಲನ-ವಲನದ ಮಾಹಿತಿ ಪಡೆಯಲು ನಾಲ್ಕು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, ಆನೆಗಳ ಹಿಂಡು ಎಲ್ಲಿದೆ ಎಂಬ ಕುರಿತು ನಿರಂತರವಾಗಿ ಮೊಬೈಲ್, ಆಕಾಶವಾಣಿ ಮೂಲಕ ಗ್ರಾಮಸ್ಥರಿಗೆ ಮಾಹಿತಿ ಒದಗಿಸಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸ್ಥಳೀಯ ಗ್ರಾಮೀಣ ಪ್ರದೇಶದ 125 ರಿಂದ 150 ಜನರನ್ನೊಳಗೊಂಡ ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಕೂಡ ಕಾರ್ಯಾಚರಣೆ ನಡೆಸಿ ಆನೆಗಳ ಚಲನ -ವಲನದ ಬಗ್ಗೆ ಮಾಹಿತಿ ಒದಗಿಸುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ತಿಳಿಸಿದ್ದಾರೆ.