ಕೆಎಸ್ಆರ್ಟಿಸಿ ಗೆ ಎದುರಾದ ಒಂಟಿ ಸಲಗ: ಚಾಲಕ ಹಾಗೂ ನಿರ್ವಾಹಕರ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು - tarikere
ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಸಂತವೇರಿ ಘಾಟ್ ಬಳಿ ಒಂಟಿಸಲಗವೊಂದು ಕೆಎಸ್ಆರ್ಟಿಸಿ ಬಸ್ಗೆ ಎದುರಾಗಿದೆ. ಇನ್ನೂ ಆನೆಯ ನಡೆಗೆ ಪ್ರಯಾಣಿಕರು ತಬ್ಬಿಬ್ಬಾಗಿದ್ದು, ಕೂಗಾಡಲಾರಂಭಿಸಿದ್ದಾರೆ. ಆದರೆ ಸಮಯಪ್ರಜ್ಞೆ ಮೆರೆದ ಚಾಲಕ ಹಾಗೂ ನಿರ್ವಾಹಕರು ಧೈರ್ಯದಿಂದ ಸಂದರ್ಭವನ್ನು ಸಂಬಾಳಿಸಿದ್ದಾರೆ. ಸುಮಾರು ಒಂದು ಕಿ.ಮೀ. ಹಿಮ್ಮುಖವಾಗಿ ಬಸ್ ಚಲಾಯಿಸಿದ ಚಾಲಕ 50 ಕ್ಕೂ ಅಧಿಕ ಪ್ರಯಾಣಿಕರ ಆತಂಕವನ್ನು ದೂರ ಮಾಡಿದ್ದಾರೆ.