ಮಸ್ಕಿಯಲ್ಲಿ ಬೀದಿ ಬದಿ ಮಿರ್ಚಿ ಖರೀದಿಸಿದ ಸಚಿವ ಆರ್. ಆಶೋಕ್ - ವಿಡಿಯೋ - ಮಿರ್ಚಿ ಖರೀದಿಸಿದ ಸಚಿವ ಆರ್. ಆಶೋಕ್
ರಾಯಚೂರು: ಮಸ್ಕಿ ವಿಧಾನಸಭಾ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಚಿವ ಆರ್. ಅಶೋಕ್ ಪಟ್ಟಣದ ತೇರು ಬಜಾರ್ ರಸ್ತೆ ಬದಿ ಮಿರ್ಚಿ ಖರೀದಿಸಿದರು. ಕಾರಿನಿಂದ ಇಳಿದು ನೇರವಾಗಿ ಮಿರ್ಚಿ ಮಾರುತ್ತಿದ್ದ ಮಹಿಳೆ ಬಳಿ ಬಂದ ಸಚಿವರು, ಮಿರ್ಚಿ ಖರೀದಿಸಿ ತೆರಳಿದರು. ಸ್ವತಃ ಸಚಿವರೇ ಮಿರ್ಚಿ ಖರೀದಿಸಲು ಬಂದಿದ್ದು ನೋಡಿ ಮಹಿಳೆ ಸಂತಸಗೊಂಡರು.