ಚಾಮುಂಡಿ ಬೆಟ್ಟದಲ್ಲಿ ನೀರುಕೋಳಿ ನುಂಗಲು ಯತ್ನಿಸಿದ ಹೆಬ್ಬಾವು.. ವಿಡಿಯೋ ವೈರಲ್ - Python tryed to swallow chicken
ಮೈಸೂರು: ಶ್ರೀಚಾಮುಂಡಿ ಬೆಟ್ಟದ ದೇವಿಕೆರೆ ಬಳಿ ಹೆಬ್ಬಾವಿನ ಮರಿ ನೀರು ಕೋಳಿಯನ್ನು ಹಿಡಿದು ನುಂಗಲು ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ನಗರದ ಚಾಮುಂಡಿ ಬೆಟ್ಟದ ಮೇಲೆ ಇರುವ ದೇವಿಕೆರೆ ಬಳಿ ಹೆಬ್ಬಾವಿನ ಮರಿಯೊಂದು ದೇವಿಕೆರೆಯ ಪಕ್ಕದಲ್ಲಿ ಬಿಸಿಲು ಕಾಯಿಸುತ್ತಾ ಕುಳಿತಿದ್ದ ನೀರುಕೋಳಿಯನ್ನು ಹಿಡಿದು ಅದನ್ನು ನುಂಗಲು ಯತ್ನಿಸುತ್ತಿರುವ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಹಾವನ್ನು ಹಿಡಿಯಲು ಸ್ಥಳೀಯ ಸ್ನೇಕ್ ಕುಮಾರ್ ಅವರಿಗೆ ಕರೆ ಮಾಡಿದ್ದಾರೆ. ಸ್ನೇಕ್ ಕುಮಾರ್ ಬರುವ ವೇಳೆಗೆ ಹೆಬ್ಬಾವಿನ ಮರಿ ನಾಪತ್ತೆಯಾಗಿದೆ.