ಗಾಯಗೊಂಡು ರಸ್ತೆಯಲ್ಲಿ ಒದ್ದಾಡಿದ ಹೆಬ್ಬಾವು - ಗಾಯಗೊಂಡ ಹೆಬ್ಬಾವು
ಕೊಪ್ಪಳ: ರಸ್ತೆ ದಾಟುತ್ತಿದ್ದ ಹೆಬ್ಬಾವಿನ ಮೇಲೆ ವಾಹನ ಹರಿದ ಪರಿಣಾಮ ಹೆಬ್ಬಾವು ಗಾಯಗೊಂಡು ರಸ್ತೆಯಲ್ಲಿ ಒದ್ದಾಡಿದ ಘಟನೆ ತಾಲೂಕಿನ ಗುಳದಳ್ಳಿ ಗ್ರಾಮದ ಬಳಿ ನಡೆದಿದೆ. ಗುಳದಳ್ಳಿ ಗ್ರಾಮದಿಂದ ಅನತಿ ದೂರದಲ್ಲಿ ಗಂಗಾವತಿ ರಸ್ತೆಯಲ್ಲಿ ಸುಮಾರು 10 ಅಡಿಗೂ ಹೆಚ್ಚು ಉದ್ದದ ಹೆಬ್ಬಾವು ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ವಾಹನ ಹೆಬ್ಬಾವಿನ ಮೇಲೆ ಹರಿದ ಪರಿಣಾಮ ಹೆಬ್ಬಾವಿನ ತಲೆಯ ಭಾಗಕ್ಕೆ ಪೆಟ್ಟು ಬಿದ್ದು ಮುಂದೆ ಸಾಗಲು ಆಗದೆ ರಸ್ತೆಯಲ್ಲೇ ಒದ್ದಾಡಿದೆ.