ಆಸ್ಪತ್ರೆ ಆವರಣದಲ್ಲಿ ಹೆಬ್ಬಾವು ಪ್ರತ್ಯಕ್ಷ - Government Hospital
ಮಧುಗಿರಿ ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ತಡರಾತ್ರಿ ಆಸ್ಪತ್ರೆಯ ಕಾಂಪೌಂಡ್ನಲ್ಲಿ ಹರಿದಾಡಿದ ಹೆಬ್ಬಾವನ್ನು ಕಂಡು ರೋಗಿಗಳು ತಕ್ಷಣ ಆಸ್ಪತ್ರೆಯಿಂದ ಹೊರ ಓಡಿ ಬಂದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾವನ್ನು ವಶಕ್ಕೆ ಪಡೆದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.