ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ:ಜನರಲ್ಲಿ ಆತಂಕ - python appears in public place latest news
ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಜನರು ಆತಂಕಕ್ಕೆ ಒಳಗಾದ ಘಟನೆ ಕಲಬುರಗಿ ನಗರದ ಹೊರವಲಯದ ನಂದೂರ ಇಂಡಸ್ಟ್ರಿಯಲ್ ಬಡಾವಣೆಯಲ್ಲಿ ನಡೆದಿದೆ. ಸುಮಾರು 10 ಅಡಿ ಉದ್ದದ ಹಾಗೂ 25 ಕೆ.ಜಿ. ತೂಕದ ಹಾವು ಕಂಡ ಜನ ಭಯಭೀತರಾಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಸ್ನೇಕ್ ಪ್ರಶಾಂತ್ ಸುರಕ್ಷಿತವಾಗಿ ಹಾವು ಹಿಡಿದು ನಗರದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಈ ತರಹದ ಹಾವಿನಲ್ಲಿ ವಿಷ ಕಡಿಮೆ ಇದ್ದರೂ ಮನುಷ್ಯನ ದೇಹಕ್ಕೆ ಸುತ್ತಿಕೊಂಡು ಪ್ರಾಣಾಪಾಯ ತಂದೊಡ್ಡುತ್ತದೆ ಎಂದು ಪ್ರಶಾಂತ್ ಮಾಹಿತಿ ನೀಡಿದ್ರು.