ಮಗಳಿಗೆ ಶಿಕ್ಷಣ ಕೊಡಿಸೋದಾ...ಮನೆ ಉಳಿಸೋದಾ..ಜೀವನ ಸಾಗಿಸೋದಾ?: ದಾನಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿ ಬಡ ಮಹಿಳೆ - ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಸುಂದರಿ
ಈಕೆ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಸುಂದರಿ. ಪತಿ ಕಳೆದುಕೊಂಡ ಈಕೆಗೆ 10 ವರ್ಷದ ಅನಾರೋಗ್ಯಕ್ಕೊಳಗಾದ ಮಗಳಿದ್ದು, ಎಲ್ಲ ಜವಾಬ್ದಾರಿಯನ್ನು ತಾನೇ ಹೊತ್ತಿದ್ದಾಳೆ. ಈಕೆಯ ಮನೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ತನ್ನ ತವರು ಮನೆಯಿಂದ ಮಗಳನ್ನು ಶಾಲೆಗೆ ಬಿಡಲು ಪ್ರತಿದಿನ 300 ರೂಪಾಯಿಗಳನ್ನು ವ್ಯಯಿಸಬೇಕಾದ ಪರಿಸ್ಥಿತಿಯಿದೆ. ಕೂಲಿ-ನಾಲಿ ಮಾಡಿ ತನ್ನ ಅನಾರೋಗ್ಯ ಮಗುವಿನೊಂದಿಗೆ ಬದುಕು ಸಾಗಿಸುತ್ತಿರುವ ಮಹಿಳೆಯೀಗ, ಮಗಳಿಗೆ ಶಿಕ್ಷಣ ಕೊಡಿಸುವುದೋ, ಜೀವನ ಮಾಡುವುದೋ ಎನ್ನುವ ಗೊಂದಲಕ್ಕೀಡಾಗಿದ್ದಾರೆ.