ಕರ್ನಾಟಕ

karnataka

ETV Bharat / videos

ನಾಯಿಮರಿಗಳ ಜೀವನ್ಮರಣ ಹೋರಾಟ..ತಾಯಿಯ ರೋಧನೆ ಕಂಡು ಅಗ್ನಿಶಾಮಕ ದಳದಿಂದ ರಕ್ಷಣೆ - fight in the pipe

By

Published : Jan 9, 2021, 4:44 PM IST

ಹಾವೇರಿ: ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಚರಂಡಿ ನೀರಿಗೆ ಸಂಪರ್ಕ ಕಲ್ಪಿಸುವ ಪೈಪ್‌ನಲ್ಲಿ ಸಿಲುಕಿದ್ದ ಮೂರು ನಾಯಿ ಮರಿಗಳನ್ನು ರಕ್ಷಣೆ ಮಾಡಲಾಗಿದೆ. ನಗರದ ಹರ್ಷಾ ವರ್ಷಾ ಕಾಂಪ್ಲೆಕ್ಸ್​ನಲ್ಲಿ ಚರಂಡಿ ಪೈಪ್​ನಲ್ಲಿ ಬೀದಿ ನಾಯಿ, ಮರಿಗಳನ್ನು ಹಾಕಿತ್ತು. ರಾತ್ರಿ ಸುರಿದ ಮಳೆಗೆ ಪೈಪ್​​ನಲ್ಲಿ ನೀರು ತುಂಬಿಕೊಂಡು ಮರಿಗಳು ಜೀವನ್ಮರಣ ಹೋರಾಟದಲ್ಲಿದ್ದವು, ಇದನ್ನು ಕಂಡು ತಾಯಿ ನಾಯಿ ಅಸಹಾಯಕತೆಯಿಂದ ಚೀರಾಡುತ್ತಿದ್ದ ವೇಳೆ ಸ್ಥಳೀಯರು ಅಗ್ನಿಶಾಮಕ ದಳವನ್ನು ಕರೆಯಿಸಿ ಮರಿಗಳನ್ನು ರಕ್ಷಣೆ ಮಾಡಿದ್ದಾರೆ.

ABOUT THE AUTHOR

...view details