ಮಳೆ ಬಂದರೂ ಡೋಂಟ್ ಕೇರ್ : ಗಂಟೆಗಟ್ಟಲೇ ನಿಂತು ಅಪ್ಪುವಿನ ಅಂತಿಮ ದರ್ಶನ ಪಡೆದ ಫ್ಯಾನ್ಸ್
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅಂದರೆ ಅಭಿಮಾನಿಗಳಿಗೆ ಎಷ್ಟು ಹುಚ್ಚು, ಕ್ರೇಜ್ ಇದೆ ಅನ್ನೋದಕ್ಕೆ ಇವತ್ತಿನ ಸನ್ನಿವೇಶವೇ ಸಾಕ್ಷಿಯಾಗಿತ್ತು. ಅಪ್ಪು ಪಾರ್ಥಿವ ಶರೀರ ದರ್ಶನಕ್ಕೆ ಜನಸಾಗರವೇ ಹರಿದು ಬರ್ತಿದೆ. ಅಭಿಮಾನಿಗಳನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮಳೆ ನಡುವೆಯೂ ಅಪ್ಪುವನ್ನ ಕಡೆ ಬಾರಿ ನೋಡಬೇಕು ಅನ್ನೋ ಅಭಿಮಾನಿಗಳ ಉತ್ಸಾಹ ಕುಗ್ಗಿರಲಿಲ್ಲ. ದಿಢೀರ್ ಅಂತಾ ಜೋರು ಮಳೆ ಬಂದರು ಮಳೆಯಲ್ಲೇ ಪಾರ್ಥೀವ ಶರೀರದ ದರ್ಶನ ಪಡೆದರು.