ಮೈಸೂರಿನ ಶಕ್ತಿಧಾಮದ ಮಕ್ಕಳಿಂದ 'ಗಾನ ನಮನ'.. ವಿಡಿಯೋ - ಮೈಸೂರಿನ ಶಕ್ತಿಧಾಮ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಡಾ.ರಾಜ್ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ನಡೆಸುತ್ತಿದ್ದ ಮೈಸೂರಿನ ಶಕ್ತಿಧಾಮ ಆಶ್ರಮದ ಮಕ್ಕಳು ಭಾಗಿಯಾಗಿದ್ದಾರೆ. ಈ ಮಕ್ಕಳ ಹೊಣೆಯನ್ನು ಅಪ್ಪು ಹೊತ್ತಿದ್ದರು. ಮಕ್ಕಳು ವೇದಿಕೆಯ ಮೇಲೆ ಒಟ್ಟಾಗಿ ಹಾಡುವ ಮೂಲಕ ಅಪ್ಪುಗೆ 'ಗೀತ ನಮನ' ಸಲ್ಲಿಸಿದರು. 'ಶಕ್ತಿಧಾಮದ ಹೆಸರು ಎಷ್ಟು ಸುಂದರ' ಹಾಡಿನ ಮೂಲಕ ಮಕ್ಕಳಿಂದ ಗಾನ ನಮನ ಸಲ್ಲಿಸಲಾಯಿತು.