ಕೊರೊನಾ ವಿರುದ್ಧ ಹಮ್ ಹೋಂಗೆ ಕಾಮ್‌ಯಾಬ್.. ಲೇಡಿ ಸಿಂಗಂ ಫಾತೀಮಾ ವಿಭಿನ್ನ ಜಾಗೃತಿ! - pulkeshi nagar acp sung song about corona awarness
ಪುಲಕೇಶಿನಗರ ಉಪವಿಭಾಗದ ಎಸಿಪಿ ತಬರಕ್ ಫಾತೀಮಾ ಅವರು ಹಾಡು ಹಾಡುವ ಮೂಲಕ ಸಾರ್ವಜನಿಕರಲ್ಲಿ ವಿನೂತನವಾಗಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಲಾಕ್ಡೌನ್ ಆದೇಶವಿದ್ದರೂ ಮುಂಜಾಗ್ರತಾ ಕ್ರಮಕೈಗೊಳ್ಳದೆ ಹೊರ ಬರುವವರಿಗೆ ಪರಿ ಪರಿಯಾಗಿ ಪೊಲೀಸರು ಮನವಿ ಮಾಡ್ತಿದ್ದಾರೆ. ಈ ಮಹಿಳಾ ಅಧಿಕಾರಿ ಕೂಡ ಬೀದಿ ಬೀದಿಗೆ ತೆರಳಿ ಹೊಯ್ಸಳ ಮೂಲಕ ಕೊರೊನಾ ವಿರುದ್ಧ ಸಮರದಲ್ಲಿ ಎಲ್ಲರೂ ಒಟ್ಟಾಗಿ ಹೋರಾಟ ನಡೆಸೋಣ ಅಂತಿದ್ದಾರೆ. ಮೈಕ್‌ನಲ್ಲಿ ಹಮ್ ಹೋಂಗೆ ಕಾಮಯಾಬ್ ಅಂತಾ ಹಿಂದಿ ಹಾಡಿನ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸಿದರು. ಜತೆಗೆ ಜನರಲ್ಲಿ ವಿಶ್ವಾಸ ತುಂಬುವ ಕೆಲಸವನ್ನ ಇವರು ಮಾಡ್ತಿದ್ದಾರೆ.