ಹುಬ್ಬಳ್ಳಿಯಲ್ಲಿ ಜನಜೀವನ ಯಥಾಸ್ಥಿತಿ: ಚಿಟ್ಟಗುಪ್ಪಿ ಆಸ್ಪತ್ರೆ ಎದುರು ಸಾರ್ವಜನಿಕರಿಗೆ ಸ್ಕ್ರೀನಿಂಗ್ - hubli news
ಹುಬ್ಬಳ್ಳಿ: ರಾಜ್ಯ ಸರ್ಕಾರ ಧಾರವಾಡ ಜಿಲ್ಲೆಯಾದ್ಯಂತ ಲಾಕ್ಡೌನ್ ಆದೇಶ ನೀಡಿದೆ. ಆದರೆ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿನಗರ ಸಾರಿಗೆ, ಬಿಆರ್ಟಿಎಸ್ ಬಸ್ ಸ್ಥಗಿತವಾಗಿದ್ದು ಬಿಟ್ಟರೆ ಜನಜೀವನ ಯಥಾಸ್ಥಿತಿಯಲ್ಲಿ ಇದೆ. ಇದರ ನಡುವೆ ಜಿಲ್ಲಾಡಳಿತ ಚಿಟ್ಟಗುಪ್ಪಿ ಆಸ್ಪತ್ರೆ ಎದುರು ಸಾರ್ವಜನಿಕರಿಗೆ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿದ್ದು, ಜನರು ಸಾಲುಗಟ್ಟಿ ನಿಂತು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಈಟಿವಿ ಭಾರತ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.