ಕರ್ನಾಟಕ

karnataka

ETV Bharat / videos

ಜನಪ್ರತಿನಿಧಿಗಳ ಸರ್ಕಾರಿ ಶಾಲೆ ದತ್ತು ಪ್ರಸ್ತಾವನೆ ಉತ್ತಮ ಕಾರ್ಯ: ಬಿ. ನಾಗೇಂದ್ರ - ಜನಪ್ರತಿನಿಧಿಗಳ ಸರ್ಕಾರಿ ಶಾಲೆ ದತ್ತು ಸ್ವೀಕಾರ

By

Published : Feb 15, 2020, 7:52 PM IST

ಬಳ್ಳಾರಿ: ನಶಿಸಿ ಹೋಗುತ್ತಿರುವ ಸರ್ಕಾರಿ ಶಾಲೆಗಳ‌ ಉನ್ನತೀಕರಣಕ್ಕಾಗಿ ಶಿಕ್ಷಣ ತಜ್ಞರ ಸಮಿತಿಯೊಂದು ರಾಜ್ಯದ 224 ಕ್ಷೇತ್ರಗಳ ಜನಪ್ರತಿನಿಧಿಗಳು ತಲಾ ಎರಡು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಲು ಮುಂದಾಗಬೇಕೆಂಬ ಪ್ರಸ್ತಾವನೆಯನ್ನು ಸಮಿತಿಯು ರಾಜ್ಯ ಸರ್ಕಾರದ ಮುಂದಿಟ್ಟಿದ್ದು, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಸ್ವಾಗತಿಸಿದ್ದಾರೆ. ಇದೊಂದು ಉತ್ತಮ ಸಲಹೆ ಸೂಚನೆಯಾಗಿದ್ದು, ಸಮಿತಿಯನ್ನ ನಾನು ಅಭಿನಂದಿಸುತ್ತೇನೆ. ಈಗಾಗಲೇ ನಾನೂ ಕೂಡ ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗೆ ಹೆಚ್ಚಿನ‌ ಒತ್ತು ಕೊಡುವಂತೆ ನಮ್ಮ ಅಧಿಕಾರ ವರ್ಗಕ್ಕೆ ತಿಳಿಸಿರುವೆ. ಸರ್ಕಾರಿ ಶಾಲೆಗಳನ್ನ ದತ್ತು ಸ್ವೀಕರಿಸೋದು ಕೂಡ ಒಂದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

For All Latest Updates

ABOUT THE AUTHOR

...view details