ಪಕ್ಷ ಯಾವುದೇ ಇರಲಿ, ಕೆಲಸ ಮಾಡೋರಿಗೇ ನಮ್ಮ ವೋಟು ಅಂತಿದ್ದಾರೆ ಈ ಕ್ಷೇತ್ರದ ಜನ - Bangalore latest news
ಬೆಂಗಳೂರು: ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಶವಂತಪುರ ವಾರ್ಡ್ನಲ್ಲಿ ಬರುವ ಬಿ.ಕೆ. ನಗರ ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗಿದೆ. ಚರಂಡಿ ಕೆಲಸಕ್ಕಾಗಿ ಅಗೆದ ರಸ್ತೆಯನ್ನು ದುರಸ್ತಿಪಡಿಸದೆ ಹಾಗೆಯೇ ಬಿಡಲಾಗಿದ್ದು, ಒಂದು ವರ್ಷವಾದ್ರೂ ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನಹರಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಸ್ಥಳೀಯರನ್ನು ಕೇಳಿದರೆ ಮಾಜಿ ಶಾಸಕರು ಇಲ್ಲಿನ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದು, ಬಿ.ಕೆ. ನಗರವನ್ನು ಅಭಿವೃದ್ಧಿಪಡಿಸಿದ್ದಾರೆ. ಹಾಗಾಗಿ ಕೆಲಸ ಮಾಡುವವರಿಗೇ ನಮ್ಮ ವೋಟು ಅಂತಿದ್ದಾರೆ. ರಸ್ತೆ ಅವ್ಯವಸ್ಥೆ ಕುರಿತು ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.