ಮಲ್ಲಿಗೆನಗರಿ ಪಕ್ಷಿಪ್ರೇಮಿಗಳು.. ಪಾರಿವಾಳಗಳಿಗೆ ಬಗೆಬಗೆ ತಿನಿಸು ತಿನ್ನಿಸುವ ಖುಷಿ!
ಸೂರ್ಯೋದಯವಾದ್ರೇ ಸಾಕು ಮೈಸೂರಿನ ಅರಮನೆಯತ್ತ ಪಾರಿವಾಳಗಳು ಹಾರಿ ಬರುತ್ತವೆ. ಹಾಗೇ ಬರುವ ಪಕ್ಷಿಗಳಿಗೆ ಬಗೆಬಗೆಯ ತಿನಿಸುಗಳನ್ನು ನೀಡುವುದೆಂದ್ರೆ ಇಲ್ಲಿನ ಜನರಿರಿಗೆ ಎಲ್ಲಿಲ್ಲದ ಸಂಭ್ರಮ. ಮುಸುಕಿನ ಜೋಳ, ಅಕ್ಕಿ, ರಾಗಿ, ಗೋಧಿ ಸೇರಿ ಆಹಾರ ಪದಾರ್ಥಗಳನ್ನು ಹಕ್ಕಿಗಳಿಗೆ ನೀಡಿ ಖುಷಿ ಪಡೆಯುತ್ತಾರೆ. ಆಹಾರ ಪೊಟ್ಟಣ ನೋಡುತ್ತಿದ್ದಂತೆ ಅರಮನೆಯಲ್ಲಿ ಗೂಡುಕಟ್ಟಿ ಕುಳಿತ ಪಾರಿವಾಳಗಳು ಒಂದೊಂದಾಗಿ ಬರುತ್ತವೆ. ಹಾಗೇ ತಮ್ಮ ವಿಸ್ತರಣೆ ತೋರಿಸುತ್ತವೆ. ಈ ಸೌಂದರ್ಯ ನೋಡುವುದೊಂದೇ ಸೌಭಾಗ್ಯ.