ಕರ್ನಾಟಕ

karnataka

ETV Bharat / videos

ಚಿರತೆ ದಾಳಿಗೆ ಯುವಕ ಬಲಿ: ಶಾಸಕರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು - mla paranna munavalli

By

Published : Jan 2, 2021, 3:29 PM IST

ಗಂಗಾವತಿ(ಕೊಪ್ಪಳ): ತಾಲೂಕಿನ ಕರಿಯಮ್ಮನಗಡ್ಡೆ ಗ್ರಾಮದಲ್ಲಿ ನಿನ್ನೆ ಮೇಕೆ ಮೇಯಿಸಲು ತೆರಳಿದ್ದ ಯುವಕನ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದಿತ್ತು‌. ಹೀಗಾಗಿ ಇಂದು ಶಾಸಕ ಪರಣ್ಣ ಮುನವಳ್ಳಿ, ಯುವಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ತೆರಳಿದ್ದರು. ಈ ವೇಳೆ ಜನರ ಪ್ರಾಣದ ಜೊತೆ ಯಾಕಿಷ್ಟು ಚಲ್ಲಾಟ‌ ಆಡುತ್ತಿದ್ದೀರಿ. ನೀವು ತಣ್ಣಗೆ ಮನೆಯಲ್ಲಿ ಇರುತ್ತೀರಿ. ನಮ್ಮಂಥ ಬಡವರ ಕತೆ ಏನು?. ನಾವು ಮಗನನ್ನು ಕಳೆದುಕೊಂಡಿದ್ದೇವೆ ಎಂದು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಬಳಿಕ ಶಾಸಕರು ಮಾತನಾಡಿ, ಪ್ರಾಣ ಹಾನಿಗೆ ಅರಣ್ಯ ಇಲಾಖೆಯಿಂದ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ABOUT THE AUTHOR

...view details