ಪಲಾವ್ ತಯಾರಿ ವಿಷಯಕ್ಕೆ ರೈತರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಕಿತ್ತಾಟ - bharat band
ಧಾರವಾಡ: ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಧಾರವಾಡದಲ್ಲಿ ಹೋರಾಟಗಾರರು ವಿಭಿನ್ನವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನಗರದ ಜುಬಿಲಿ ವೃತ್ತದಲ್ಲಿ ರೈತ ಸಂಘಟನೆಗಳು ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ರು. ನೂರಕ್ಕೂ ಹೆಚ್ಚು ಹೋರಾಟಗಾರಿಗೆ ಸಕ್೯ಲ್ನಲ್ಲಿ ಪಲಾವ್ ತಯಾರಿಸುವ ಮೂಲಕ ವಿಭಿನ್ನವಾಗಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕಾಂಗ್ರೆಸ್ ಮುಖಂಡರು ಪಲಾವ್ ಪಾತ್ರೆ ಹಿಡಿದು ಫೋಟೋ ಪೋಸ್ ಕೊಡಲು ಬಂದಾಗ ರೈತ ಹೋರಾಟಗಾರರು ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ನಾಯಕರ ಕೈಯಿಂದ ಸೌಟು ಕಿತ್ತುಕೊಳ್ಳುವ ಸಲುವಾಗಿ ಘರ್ಷಣೆ ಉಂಟಾಯಿತು. ಕೊನೆಗೆ ಪೊಲೀಸರು ಪಾತ್ರೆಗಳನ್ನು ತೆರವುಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.