ಬಗರ್ ಹುಕುಂ ಅರಣ್ಯ ಭೂಮಿಗಾಗಿ ಸರ್ಕಾರದ ವಿರುದ್ಧ ಬೀದಿಗಿಳಿದ ರೈತರು
ರೊಟ್ಟಿ ಬುತ್ತಿ ಗಂಟು ತಗೊಳ್ಳಿ ನಮಗೆ ಬಗರ್ ಹುಕುಂ ಭೂಮಿ ಕೊಡಿ ಎಂಬ ಘೋಷಣೆ ಹಾಕುವ ಮೂಲಕ ಸರ್ಕಾರದ ವಿರುದ್ಧ ರೈತರು ಬಗರ್ ಹುಕುಂ ಅರಣ್ಯ ಭೂಮಿಗಾಗಿ ಭರಮಸಾಗರ ನಾಡಾ ಕಚೇರಿಯಿಂದ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಾಯತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಭೂ ಹಕ್ಕುದಾರರ ವೇದಿಕೆ, ಕರ್ನಾಟಕ ಶಾಂತಿ ಸೌಹಾರ್ದ ವೇದಿಕೆ ನೇತೃತ್ವದಲ್ಲಿ ಈ ಜನಾಂದೋಲನ ಹಮ್ಮಿಕೊಂಡಿದ್ದು, 2016-18 ರಲ್ಲಿ ಅಂದಿನ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಬಗರ್ ಹುಕುಂ ಜಮೀನು ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಪತ್ರ ನೀಡಲು ಕಾಯ್ದೆ ಕೂಡ ಜಾರಿಗೆ ತಂದಿದ್ದರು. ಪ್ರತಿಭಟನಾಕಾರರು ತಕ್ಷಣ ಭೂಮಿಯನ್ನು ಹಕ್ಕುದಾರರಿಗೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.