ಹುಣಸೋಡು ಸ್ಫೋಟ: ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ಪ್ರತಿಭಟನೆ - ಹುಣಸೋಡು ಸ್ಫೋಟ
ಶಿವಮೊಗ್ಗ: ಹುಣಸೋಡು ಸ್ಫೋಟದಿಂದ ಹಾನಿಗೊಳಗಾಗಿರುವ ಮನೆಗಳಿಗೆ ಮಳೆ ಬರುವ ಮುನ್ನ ಪರಿಹಾರ ನೀಡಬೇಕು ಹಾಗೂ ಅಕ್ರಮ ಕಲ್ಲುಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು ಎಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ.ರಮೇಶ್ ಗೌಡ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಹುಣಸೋಡು ಕಲ್ಲು ಕ್ವಾರಿ ಸ್ಫೋಟದ ತೀವ್ರತೆಗೆ ಹುಣಸೋಡು, ಅಬ್ಬಲಗೆರೆ, ಬಸವನ ಗಂಗೂರು, ಗೆಜ್ಜೆನಹಳ್ಳಿ, ಹನುಮಂತ ನಗರದ ಸೇರಿದಂತೆ ಅಕ್ಕ ಪಕ್ಕದ ಅನೇಕ ಗ್ರಾಮಗಳಿಗೆ ಹಾನಿಯಾಗಿದೆ ಎಂದು ಆರೋಪಿಸಿದರು.