ಪಿಂಚಣಿ ಪರಿಷ್ಕರಿಸಲು ಬ್ಯಾಂಕ್ ನಿವೃತ್ತ ನೌಕರರಿಂದ ಧರಣಿ
ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿ ಹೆಚ್ಚಳ ಸೇರಿದಂತೆ ಹಲವಾರು ಬೇಡಿಕೆ ಈಡೇರಿಸಲು ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಹಾಗೂ ನಿವೃತ್ತ ನೌಕರರ ಒಕ್ಕೂಟ ದ.ಕ ಜಿಲ್ಲಾ ಘಟಕದ ವತಿಯಿಂದ ಮಂಗಳೂರಿನಲ್ಲಿ ಧರಣಿ ನಡೆಯಿತು. ನಗರದ ಬಲ್ಮಠ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ನ ವೃತ್ತ ಕಚೇರಿಯ ಮುಂಭಾಗ ನಡೆದ ಈ ಧರಣಿಯಲ್ಲಿ ಪಿಂಚಣಿ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.