ಮುಂದುವರೆದ ಸಾರಿಗೆ ನೌಕರರ ಮುಷ್ಕರ: ರಸ್ತೆಗಿಳಿಯದ ಬಿಎಂಟಿಸಿ ಬಸ್
ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಬಿಎಂಟಿಸಿ ಡಿಪೋಗಳಲ್ಲಿ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಬಸ್ ನಿಲ್ಲಿಸಿ ಡಿಪೋಗಳಲ್ಲಿ ಮುಷ್ಕರ ಆರಂಭಿಸಿದ್ದಾರೆ. ಯಶವಂತಪುರ ಡಿಪೋ ಸೇರಿದಂತೆ, ಕೆಲ ಡಿಪೋಗಳಲ್ಲಿ ಬಿಎಂಟಿಸಿ ಬಸ್ಗಳು ನಿಂತಲ್ಲೇ ನಿಂತಿವೆ. ಬಿಎಂಟಿಸಿ ಬಿಡದಿ ಡಿಪೋನಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ನಮ್ಮ ಬೇಡಿಕೆ ಈಡೇರಿಕೆಗೆ, ಪ್ರತಿಭಟನೆಗೆ ಸಹಕರಿಸಬೇಕೆಂದು ಬಿಎಂಟಿಸಿ ಸಿಬ್ಬಂದಿ ಆನಂದ್ ಮನವಿ ಮಾಡಿದ್ದಾರೆ. ನೂರಾರು ಬಸ್ಗಳ ಸಂಚಾರ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ.