ಯಕ್ಷಗಾನ ಭಾಗವತರಿಗಾದ ಅವಮಾನ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ - shivmogga Kannada Karmika Rakshana Vedik Protest
ಶಿವಮೊಗ್ಗ: ಯಕ್ಷಗಾನ ಕಲಾವಿದ ಸತೀಶ್ ಶೆಟ್ಟಿ ಪಟ್ಲಾ ಅವರಿಗೆ ಅವಮಾನ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾಗವತಿಕೆಗೆ ತೆರಳಿದ್ದ ಸತೀಶ್ ಶೆಟ್ಟಿ ಅವರಿಗೆ ಮೇಳದ ಯಜಮಾನರು ರಂಗಸ್ಥಳದಲ್ಲಿಯೇ ಸಾರ್ವಜನಿಕವಾಗಿ ಅವಮಾನ ಮಾಡಿ ಭಾಗವತಿಕೆಯಿಂದ ಹಿಂದೆ ಕಳುಹಿಸಿದ್ದಾರೆ. ಈ ಹಿನ್ನೆಲೆ ಸತೀಶ್ ಶೆಟ್ಟಿ ಅವರಿಗೆ ಅವಮಾನ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.