ಕರ್ನಾಟಕ

karnataka

ETV Bharat / videos

ಬೆಳಗಾವಿಯಲ್ಲಿ ಡಿಕೆಶಿ ಕಾರಿನ ಮೇಲೆ ದಾಳಿ ಆರೋಪ: ತುಮಕೂರಲ್ಲಿ ಕಾಂಗ್ರೆಸ್ ಪ್ರತಿಭಟನೆ - Protest by Congress activists at Tumkur

By

Published : Mar 28, 2021, 9:53 PM IST

ತುಮಕೂರು: ಬೆಳಗಾವಿಗೆ ಭೇಟಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಕಾರು ಮತ್ತು ಬೆಂಗಾವಲು ಕಾರಿನ ಮೇಲೆ ದಾಳಿ ನಡೆಸಲಾಗಿದೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಘಟಕ ಆರೋಪಿಸಿದೆ. ನಗರದ ವೃತ್ತದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ರಮೇಶ್ ಜಾರಕಿಹೊಳಿ ಬೆಂಬಲಿಗರ ಪುಂಡಾಟಿಕೆಯನ್ನು ಖಂಡಿಸಿದರು. ತಕ್ಷಣ ರಮೇಶ್ ಜಾರಕಿಹೊಳಿ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಬಹಿರಂಗವಾಗಿ ಅಸಹ್ಯಕರ ಪದಗಳಿಂದ ಮತ್ತೊಬ್ಬರನ್ನು ನಿಂದಿಸುವ ಅವರ ಖಂಡನೀಯ ಎಂದರು. ಮಾಜಿ ಶಾಸಕ ರಫೀಕ್ ಅಹಮದ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷ ರಾಮಕೃಷ್ಣ ಭಾಗವಹಿಸಿದ್ದರು.

ABOUT THE AUTHOR

...view details