ಸಂತ ಸೇವಾಲಾಲ್, ಮರಿಯಮ್ಮ ದೇವಸ್ಥಾನ ಧ್ವಂಸ ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ - Appeal to the kalburgi ADC by the Banjara Community
ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣದ ಆವರಣದಲ್ಲಿದ್ದ ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಸ್ಥಾನ ಧ್ವಂಸ ಖಂಡಿಸಿ ಶ್ರೀನಿವಾಸ ಸರಡಗಿಯ ಗುರು ಚಿಕ್ಕವೀರೆಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ರೇವಣಸಿದ್ದ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಎಡಿಸಿ ಶಂಕ್ರಣ್ಣಾ ವಣಕಿಹಾಳ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಗೊಬ್ಬುರವಾಡಿ ಸಂತ ಸೇವಾಲಾಲ್ ಆಶ್ರಮ ಪೀಠಾಧಿಪತಿ ಬಳಿರಾಮ ಮಹಾರಾಜ್ ಹಾಗೂ ಬಂಜಾರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.