ವಕೀಲರಿಗೆ ರಕ್ಷಣೆ ಕೋರಿ ಆನೇಕಲ್ ನ್ಯಾಯವಾದಿಗಳಿಂದ ಪ್ರತಿಭಟನೆ - Lawyers seeking protection
ಆನೇಕಲ್:ಇತ್ತೀಚೆಗೆ ಹೊಸಪೇಟೆ ಕೋರ್ಟ್ ಆವರಣದಲ್ಲಿ ಹಾಡಹಗಲೇ ವಕೀಲರೊಬ್ಬರ ಬರ್ಬರ ಕೊಲೆ ನಡೆದಿತ್ತು. ಹೀಗೆ ವಕೀಲರ ಮೇಲಿನ ಹಲ್ಲೆ ಹಾಗೂ ಕೊಲೆಗಳನ್ನು ಖಂಡಿಸಿ ಆನೇಕಲ್ ಕೋರ್ಟ್ ಆವರಣದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ವಕೀಲರ ಹಿತ ಕಾಯಬೇಕು. ನ್ಯಾಯ ಒದಗಿಸುವವರಿಗೆ ತೊಂದರೆ ಆಗಬಾರದು, ಸರಿಯಾದ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿ ಹೋರಾಟ ಮಾಡುತ್ತೇವೆ ಎಂದು ನೂರಾರು ವಕೀಲರು ಕೋರ್ಟ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.