ಮಾನವ ಸರಪಳಿ ರಚಿಸಿ ಸಿಎಎ, ಎನ್ಆರ್ ಸಿ, ಎನ್ಆರ್‌ಪಿಗೆ ವಿರೋಧ - Protest against CAA
ಮಂಗಳೂರು: ಕೇಂದ್ರ ಸರಕಾರದ ಸಿಎಎ, ಎನ್ಆರ್ ಸಿ, ಎನ್ಆರ್‌ಪಿ ವಿರೋಧಿಸಿ ಇಂದು ಮಂಗಳೂರಿನಲ್ಲಿ ಸಾವಿರಾರು ಮುಸ್ಲಿಮರು ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. 'ವಿ ದಿ ಪೀಪಲ್ ಆಫ್ ಇಂಡಿಯಾ'ದ ವತಿಯಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯಿರುವ ಇಬ್ರಾಹಿಂ ಖಲೀಲ್ ಮಸ್ಜಿದ್ ನಿಂದ ಕುದ್ರೋಳಿ ಜಾಮಿಯಾ ಮಸ್ಜಿದ್ ವರೆಗೆ ಬೃಹತ್ ಮಾನವ ಸರಪಳಿಯನ್ನು ರಚಿಸಲಾಗಿತ್ತು. ಈ ಸಂದರ್ಭ ಸಂವಿಧಾನ ಉಳಿಸಿ, ಭಾರತ ಉಳಿಸಿ ಘೋಷಣೆ ಕೇಳಿ ಬಂತು.