ರಾಮನಗರ ಹಾಗೂ ಗಡಿ ಜಿಲ್ಲೆಯಲ್ಲೂ ಮಾರ್ದನಿಸಿದ ಸಿಎಎ ವಿರೋಧಿ ಕೂಗು
ಉತ್ತರ ಭಾರತ ಮತ್ತು ಮಂಗಳೂರು, ಬೆಂಗಳೂರಿನಲ್ಲಿ ಮಾರ್ದನಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಕಿಚ್ಚು ಚಾಮರಾಜನಗರ, ರಾಮನಗರ ಜಿಲ್ಲೆಗಳಿಗೂ ಕೂಡ ವ್ಯಾಪಿಸಿದೆ. ಎನ್ಆರ್ಸಿ, ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಲಾಗಿದ್ದು, ಸಾವಿರಾರು ಪ್ರತಿಭಟನಾಕಾರರು ಸಿಎಎ ವಿರುದ್ಧ ಪ್ರತಿಧ್ವನಿಸಿದ್ದಾರೆ.