ಸಿಎಎ ವಿರುದ್ಧ ಅನುಮತಿ ಪಡೆಯದೇ ಹೋರಾಟ: ಪ್ರತಿಭಟನಾಕಾರರನ್ನು ಚದುರಿಸಿದ ಪೊಲೀಸರು - ಹುಬ್ಬಳ್ಳಿಯಲ್ಲಿ ಸಿಎಎ ವಿರುದ್ಧ ಅನುಮತಿ ಪಡೆಯದೇ ಪ್ರತಿಭಟನೆ
ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಇಲ್ಲಿನ ಕಮರಿಪೇಟೆ ಮೋಹಲ್ ಜಮಾತ್, ಗವಿ ಓಣಿ ಯುವಕರು ಪೊಲೀಸ್ ಇಲಾಖೆ ಅನುಮತಿ ಪಡೆಯದೇ ಅಂಬೇಡ್ಕರ್ ವೃತ್ತದ ಬಳಿ ಏಕಾಏಕಿ ಪ್ರತಿಭಟನೆ ನಡೆಸಿದರು. ಈ ವೇಳೆ, ನೋ ಎನ್ಆರ್ಸಿ, ನೋ ಎನ್ಪಿಆರ್, ನೋ ಸಿಎಎ ಎಂದು ಬರೆದಿರುವ ಬೋರ್ಡ್ ಹಿಡಿದು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಪೊಲೀಸರು ಮಧ್ಯೆ ಪ್ರವೇಶಿಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಅನುಮತಿ ಇಲ್ಲದೇ ಪ್ರತಿಭಟನೆ ಮಾಡುವ ಹಾಗೇ ಇಲ್ಲ. ಆದ್ದರಿಂದ ಪ್ರತಿಭಟನೆ ಮಾಡಬೇಡಿ ಎಂದು ಪ್ರತಿಭಟನೆ ಮೊಟಕುಗೊಳಿಸಿದರು.