ಮಲಪ್ರಭ ನದಿಯ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿದ್ದ ಎತ್ತುಗಳ ರಕ್ಷಣೆ - ಗದಗ ಸುದ್ದಿ
ಪ್ರವಾಹದಿಂದಾಗಿ ಮಲಪ್ರಭಾ ನದಿಯಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿದೆ. ಇದರ ಪರಿಣಾಮವಾಗಿ ಹೂಳಿನಲ್ಲಿ ಎರಡು ಎತ್ತುಗಳು ಸಿಲುಕಿಕೊಂಡು ಆಚೆ ಬರದೆ ನರಳಾಡಿದ ಘಟನೆ ನಡೆದಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಹಳೇ ಸೇತುವೆ ಬಳಿ ಈ ಘಟನೆ ನಡೆದಿದೆ. ಪಕ್ಕದ ಹಳ್ಳಿ ಗೋವನಕೊಪ್ಪ ಗ್ರಾಮದ ರೈತ ನಿಂಗಪ್ಪ ಹಿರಿಗಣ್ಣವರ ಎಂಬುವರು ಎತ್ತುಗಳ ಮೈ ತೊಳೆಯಲು ಹೋದಾಗ ಕೆಸರಿನಲ್ಲಿ ಸಿಲುಕಿಕೊಂಡು ನರಳಾಡುತ್ತಿದ್ದವು. ರೈತ ನಿಂಗಪ್ಪ ತಮ್ಮ ಎತ್ತುಗಳನ್ನ ರಕ್ಷಣೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ಮೂರ್ನಾಲ್ಕು ಅಡಿಯಷ್ಟು ಹೂಳಿನಲ್ಲಿ ಎತ್ತುಗಳ ಸಿಲುಕಿಕೊಂಡಿದ್ದರಿಂದ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಅದೇ ಗ್ರಾಮದ ಕೆಲವು ರೈತರು ಕೈಗೂಡಿ ಹಗ್ಗದ ಸಹಾಯದಿಂದ ಎಳೆದು ಎತ್ತುಗಳನ್ನ ರಕ್ಷಣೆ ಮಾಡಿದ್ದಾರೆ.