ಕರ್ನಾಟಕ

karnataka

ETV Bharat / videos

ಹೈಟೆನ್ಷನ್ ವಿದ್ಯುತ್ ಕಂಬ ಏರಿದ್ದ ಹೆಬ್ಬಾವಿನ ರಕ್ಷಣೆ - protection of Python

By

Published : Mar 14, 2021, 7:59 PM IST

ಮಂಗಳೂರು : ನಗರದ ಮಿಲಾಗ್ರಿಸ್ ಬಳಿಯ ಹೈಟೆನ್ಷನ್ ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಮೆಸ್ಕಾಂ ಸಿಬ್ಬಂದಿ ರಕ್ಷಿಸಿದ್ದಾರೆ‌. ಹೈಟೆನ್ಷನ್ ವಿದ್ಯುತ್ ಸರಬರಾಜು ಕಂಬದ ಮೇಲೇರಿದ್ದ ಈ ಹೆಬ್ಬಾವನ್ನು ಕಂಡ ಸ್ಥಳೀಯರು ಈ ಬಗ್ಗೆ ಮೆಸ್ಕಾಂಗೆ ಮಾಹಿತಿ ನೀಡಿದ್ದಾರೆ‌. ತಕ್ಷಣ ಸ್ಥಳಕ್ಕೆ ಆಗಮಿಸಿರುವ ಮಲ್ಲಿಕಟ್ಟೆಯ ಮೆಸ್ಕಾಂ ಸಿಬ್ಬಂದಿ ಹೈಟೆನ್ಷನ್ ವಿದ್ಯುತ್ ಕಂಬ ಏರಿದ್ದ ಹೆಬ್ಬಾವನ್ನು ಅಪಾಯದಿಂದ ರಕ್ಷಿಸಿದ್ದಾರೆ‌. ಮೆಸ್ಕಾಂ ಸಿಬ್ಬಂದಿ ಪ್ರಕಾಶ್ ಲೋಬೋ, ರೊನಾಲ್ಡೊ ಮೊಂತೆರೋ, ತಿಮ್ಮಪ್ಪ ಗೌಡ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ABOUT THE AUTHOR

...view details