ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಪ್ರವಾಹ ಪೀಡಿತ ಪ್ರದೇಶ; ವಿಡಿಯೋ ಶೇರ್ ಮಾಡಿದ ಪ್ರೀಯಾಂಕ್ ಖರ್ಗೆ - Kharge shared flood video 2020
ಕಲಬುರಗಿ : ಉಕ್ಕಿ ಹರಿಯುತ್ತಿರುವ ಭೀಮಾ ನದಿಯಿಂದ ಜಲಕಂಟಕ ಎದುರಿಸುತ್ತಿರುವ ಪ್ರವಾಹ ಪೀಡಿತ ಕಡಬೂರ ಗ್ರಾಮದ ಪರಿಸ್ಥಿತಿಯನ್ನು ಡ್ರೋನ್ ಕ್ಯಾಮರಾದಲ್ಲಿ ಸೇರೆ ಹಿಡಿಯಲಾಗಿದೆ. ಚಿತ್ತಾಪುರ ಶಾಸಕ ಪ್ರೀಯಾಂಕ್ ಖರ್ಗೆ ಅವರು ಈ ಡ್ರೋನ್ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆ ಮೂಲಕ ಹರಿಬಿಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮಳೆಯಿಂದಾಗಿ ಬೆಂಗಳೂರಿನಲ್ಲಿ ಚರಂಡಿ ಉಕ್ಕಿ ಹರಿದಾಗ ಇಡೀ ಸರ್ಕಾರ ಜನರ ನೆರವಿಗೆ ಓಡಿ ಬರುತ್ತೆ. ಆದರೆ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹದಿಂದ ಜನರು ಬೀದಿಪಾಲಾಗಿದ್ದರೂ ಸರ್ಕಾರ ಇತ್ತ ಒಮ್ಮೆಯೂ ತಿರುಗಿ ನೋಡುವುದಿಲ್ಲ. ಲಕ್ಷಾಂತರ ಸಂತ್ರಸ್ತರು ಸರ್ಕಾರಕ್ಕೆ ಅದೃಶ್ಯರಾಗಿದ್ದೇವೆಯೇ ಎಂದು ಪ್ರೀಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.