ಹುಬ್ಬಳ್ಳಿ: ಉಚಿತ ನೇತ್ರ ತಪಾಸಣೆ ಮೂಲಕ ವಿಶೇಷವಾಗಿ ಪ್ರಧಾನಿ ಹುಟ್ಟುಹಬ್ಬ ಆಚರಣೆ - ವಿಶೇಷವಾಗಿ ಪ್ರಧಾನಿ ಮೋದಿ ಜನ್ಮದಿನಾಚರಣೆ
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಹಾಗೂ ಬಿಜೆಪಿಯ ಸಪ್ತಾ ದಿನ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ 72 ಪರಿಶಿಷ್ಟ ಜಾತಿ ಮೋರ್ಚಾ ವತಿಯಿಂದ ಸೆಟ್ಲಮೆಂಟ್ ಗಂಗಾಧರ ನಗರದ ಸಮುದಾಯ ಭವನದಲ್ಲಿಂದು ಬಡವರಿಗೆ ನೇತ್ರ ತಪಾಸಣೆ ಮಾಡುವ ಮೂಲಕ ವಿಶೇಷವಾಗಿ ಆಚರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ನೂರಾರು ಬಡವರಿಗೆ ಉಚಿತ ನೇತ್ರ ತಪಾಸಣೆ ಮಾಡಿ ಕನ್ನಡಕ ವಿತರಣೆ ಮಾಡಿದರು.