ಕೊಂಡ ಹಾಯುವಾಗ ಬಿದ್ದು ಗಾಯಗೊಂಡ ಪೂಜಾರಿ ಮಿಮ್ಸ್ಗೆ ದಾಖಲು - ಮಿಮ್ಸ್ ಆಸ್ಪತ್ರೆ
ಮಂಡ್ಯ: ಕೊಂಡ ಹಾಯುವ ವೇಳೆ ಪೂಜಾರಿ ಕೊಂಡಕ್ಕೆ ಬಿದ್ದು ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಕರಕಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವೇಶ್ವರ ಸ್ವಾಮಿ ದೇವಸ್ಥಾನದ ಕೊಂಡ ಮಹೋತ್ಸವ ಸಂದರ್ಭದಲ್ಲಿ ಘಟನೆ ನಡೆದಿದ್ದು, ಅಣ್ಣೂರು ಗ್ರಾಮದ ರೇವಣ್ಣ ಗಾಯಗೊಂಡ ಪೂಜಾರಿಯಾಗಿದ್ದಾನೆ. ಪೂಜಾರಿಯನ್ನು ಮಂಡ್ಯ ಮಿಮ್ಸ್ಗೆ ದಾಖಲು ಮಾಡಲಾಗಿದೆ. ಇವರನ್ನು ಕೊಂಡದಿಂದ ರಕ್ಷಣೆ ಮಾಡಲು ಹೋದವರೂ ಆಯ ತಪ್ಪಿ ಬಿದ್ದಿದ್ದು, ಅವರಿಗೂ ಸಣ್ಣ ಗಾಯಾಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೆ.ಎಂ.ದೊಡ್ಡಿ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.