ಕೆಲಸಕ್ಕೆ ಬರುವಂತೆ ಒತ್ತಡ ಹಾಕಲಾಗ್ತಿದೆ: ಪೊಲೀಸರ ಮೊರೆ ಹೋದ ಸಾರಿಗೆ ನೌಕರರ ಪತ್ನಿಯರು - transport workers strike
ಹೊಸಪೇಟೆ: ಕೆಲಸಕ್ಕೆ ಬರುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಸಾರಿಗೆ ನೌಕರರ ಪತ್ನಿಯರು ಹೂವಿನಹಡಗಲಿ ಪಟ್ಟಣ ಠಾಣೆ ಪೊಲೀಸರ ಮುಂದೆ ಅಳಲು ತೋಡಿಕೊಂಡರು. ನೌಕರರಿಗೆ ಕೆಲಸಕ್ಕೆ ಬರುವಂತೆ ಒತ್ತಡ ಹಾಕಲಾಗುತ್ತಿದೆ. ಅಲ್ಲದೇ, ವೇತನ ಕೂಡ ಪಾವತಿ ಮಾಡಿಲ್ಲ. ಹೀಗಾದರೆ ಜೀವನ ನಡೆಸುವುದು ಹೇಗೆ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದು. ಈ ವೇಳೆ ಪೊಲೀಸರು ಮತ್ತು ಸಾರಿಗೆ ಸಂಸ್ಥೆ ಅಧಿಕಾರಿಗಳು ಮಹಿಳೆಯರ ಮನವೊಲಿಸುವ ಪ್ರಯತ್ನ ಮಾಡಿದರು.