ಕರ್ನಾಟಕ

karnataka

ETV Bharat / videos

ಬ್ರೇಕ್​ ಬದಲು ಎಕ್ಸಲೇಟರ್ ಒತ್ತಿದ ಮಹಿಳೆ: ಮೂವರಿಗೆ ಗುದ್ದಿದ ಕಾರು! - ಕಾರಿನ ನಿಯಂತ್ರಣ ತಪ್ಪಿ ಬೈಕ್ ಸವಾರರಿಗೆ ಡಿಕ್ಕಿ

By

Published : Jan 28, 2021, 9:16 PM IST

ಮಹಿಳೆಯೊಬ್ಬರು ಬೇಜವಾಬ್ದಾರಿಯಾಗಿ ಬ್ರೇಕ್ ಬದಲಿಗೆ ಎಕ್ಸಲೇಟರ್ ಒತ್ತಿದ ಪರಿಣಾಮ ಕಾರಿನ ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್ ಒಳಗೆ ಪೆಟ್ರೋಲ್ ಹಾಕಿಸುತ್ತಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಘಟನೆ ಶಿರಸಿ ನಗರದ ಡೆವಲಪ್ಮೆಂಟ್ ಪೆಟ್ರೋಲ್ ಬಂಕ್​ನಲ್ಲಿ ನಡೆದಿದೆ. ಮಹಿಳೆ ತನ್ನ ಮಾರುತಿ 800 ಕಾರಿನಲ್ಲಿ ಪೆಟ್ರೋಲ್ ತುಂಬಿಸಲು ಪೆಟ್ರೋಲ್ ಬಂಕ್​ಗೆ ಆಗಮಿಸಿದಾಗ ಬ್ರೇಕ್ ಹಾಕುವ ಬದಲು ಎಕ್ಸಲೇಟರ್ ಒತ್ತಿದ್ದಾಳೆ. ಇದರಿಂದ ನಿಯಂತ್ರಣಕ್ಕೆ ಸಿಗದ ಕಾರು ಪೆಟ್ರೋಲ್ ಹಾಕಿಸುತ್ತಿದ್ದ ಬೈಕ್ ಸವಾರರಿಗೆ ಗುದ್ದಿದೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಶಿರಸಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಂಕ್​ನಲ್ಲಿ ನಡೆದ ಘಟನೆ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ABOUT THE AUTHOR

...view details