ಗ್ರಾಮಸ್ಥರ ಆರೋಗ್ಯ ಕಾಳಜಿಗೆ ಮುಂದಾದ ಗ್ರಾ.ಪಂ. ಅಧ್ಯಕ್ಷ - ಮಾದರಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸಾಮಾಜಿಕ ಕಾಳಜಿ ತಾಲೂಕಿನಲ್ಲಿ ಜನಪ್ರಿಯತೆ ಗಳಿಸಿದೆ. ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಅವರು ಪಂಚಾಯಿತಿ ಕಾರ್ಯ ಚಟುವಟಿಕೆಗಳ ಜೊತೆ ಗ್ರಾಮಸ್ಥರ ಆರೋಗ್ಯದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ರೋಗಿಗಳು, ಅಂಧತ್ವ ಬಾದಿತರು ಗ್ರಾಮದಲ್ಲಿ ಇರಬಾರದೆಂಬ ಹಟ ಇವರದ್ದಾಗಿದೆ. ಅದಕ್ಕಾಗಿ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಆರೋಗ್ಯ ಶಿಬಿರ ಸೇರಿದಂತೆ ಗ್ರಾಮಸ್ಥರ ವೈದ್ಯಕೀಯ ಸಮಸ್ಯೆ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.