3300 ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲು ಸಿದ್ಧತೆ: ಪಿ.ರಾಜೀವ್
ಲಿಂಗಸೂಗೂರು: ರಾಜ್ಯದಲ್ಲಿನ 3,300 ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲು ನಿಗಮ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ತಾಂಡಾ ಜನರಿಗೆ ಉದ್ಯೋಗ ಸೃಷ್ಟಿಸಲು ರಾಜ್ಯದ 3 ಕಡೆ ಟೆಕ್ಸ್ಟೈಲ್ ಮಾರ್ಟ್ ಸ್ಥಾಪಿಸಲಾಗುತ್ತಿದೆ. ರೈತರ ಶ್ರೇಯೋಭಿವೃದ್ಧಿಗೆ 15 ಜಿಲ್ಲೆಗಳಲ್ಲಿ ರೈತ ಉತ್ಪಾದಕ ಸಂಘಗಳನ್ನು ಆರಂಭಿಸಿ ಪ್ರತಿಯೊಂದು ಸಂಘದಲ್ಲಿ ಕನಿಷ್ಠ ಒಂದು ಸಾವಿರ ತಾಂಡಾ ರೈತರನ್ನು ಸದಸ್ಯರೆಂದು ನೇಮಿಸಿ ಸೌಲಭ್ಯ ನೀಡಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ತಾಂಡಾ ಜನತೆಗೆ ಉದ್ಯೋಗ ಸೃಷ್ಟಿಸುವ, ವಲಸೆ ಹೋಗುವುದನ್ನು ತಡೆಯುವ ಹಾಗೂ ಇತರೆ ಅಭಿವೃದ್ಧಿ ಕನಸು ಸಾಕಾರಗೊಳಿಸಲು ನಿಗಮ ಸ್ಥಾಪನೆ ಮಾಡಿದ್ದಾರೆ ಎಂದು ಸ್ಮರಿಸಿದರು.