ಚಾಮರಾಜನಗರದಲ್ಲಿ ಭರ್ಜರಿ ಮಳೆ... ಲಾಕ್ಡೌನ್ ಸಡಿಲಿಕೆ ಸಿಕ್ರೂ ಮನೆಯಿಂದ ಹೊರ ಬರಲಾಗದ ಜನ - Chamarajanagar
ಚಾಮರಾಜನಗರ: ಮಂಗಳವಾರ ರಾತ್ರಿ ಹಾಗೂ ಇಂದು ಮುಂಜಾನೆಯಿಂದ ಜಿಲ್ಲಾದ್ಯಂತ ಅಲ್ಲಲ್ಲಿ ಜೋರು ಮಳೆಯಾಗುತ್ತಿದ್ದು ರೈತರ ಮೊಗದಲ್ಲಿ ಸಂತಸ ವ್ಯಕ್ತವಾಗಿದೆ. ಚಾಮರಾಜನಗರ, ಕೊಳ್ಳೇಗಾಲ ಹಾಗೂ ಹನೂರು ಭಾಗದಲ್ಲಿ ಇಂದು ಮುಂಜಾನೆಯಿಂದ ಜೋರು ಮಳೆಯಾಗುತ್ತಿದ್ದು ಗುಂಡ್ಲುಪೇಟೆಯಲ್ಲಿ ರಾತ್ರಿ ಸಾಧಾರಣ ಮಳೆಯಾಗಿದೆ. ಪೂರ್ವ ಮುಂಗಾರಿನ ಭರ್ಜರಿ ಎಂಟ್ರಿಯಾಗಿದ್ದು ರೈತರ ಬಿತ್ತನೆ ಕಾರ್ಯಕ್ಕೆ ಅನೂಕೂಲವಾಗಲಿದೆ. ಇನ್ನು, ಲಾಕ್ಡೌನ್ ಸಡಿಲಿಕೆಯಿಂದ ಸಂತಸಗೊಂಡು ತಿರುಗಾಡುತ್ತಿದ್ದವರಿಗೆ ವರುಣ ಬ್ರೇಕ್ ಹಾಕಿದ್ದು ಎಲ್ಲರನ್ನೂ ಮನೆ ಸೇರುವಂತೆ ಮಾಡಿದ್ದಾನೆ.