ಗುರು ಪೌರ್ಣಿಮೆ ಹಿನ್ನೆಲೆಯಲ್ಲಿ ಸಾಯಿನಾಥನ ದರ್ಶನ ಪಡೆದ ಭಕ್ತರು
ಗುರಪೂರ್ಣಿಮೆ ಅಂಗವಾಗಿ ಇಂದು ರಾಯಚೂರು ನಗರದ ಮಾವಿನಕೆರೆ ದಡದ ಬಳಿಯ ಸಾಯಿಬಾಬಾ ಮಂದಿರದಲ್ಲಿ ಬೆಳಗ್ಗೆಯಿಂದ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ಶ್ರೀಸಾಯಿ ದರ್ಶನ ಪಡೆದು ಪುನೀತರಾದರು. ಮಕ್ಕಳು, ಮಹಿಳೆಯರು ವೃದ್ಧರಾದಿಯಾಗಿ ಸಾಯಿನಾಥನಿಗೆ ಪೂಜೆ ಸಲ್ಲಿಸಿದರು. ಭಕ್ತರಿಗೆ ದಾನಿಗಳು ಅನ್ನದಾಸೋಹ ಏರ್ಪಡಿಸಿ ಪುಣ್ಯದ ಕೆಲಸ ಮಾಡಿದರು.