ಯಡಿಯೂರಪ್ಪ ಸಿಎಂ ಆಗಲಿ ಎಂದು ಹೋಮ- ಹವನ ಮಾಡಿಸಿದ ಕಾರ್ಯಕರ್ತರು...! - ಯಡಿಯೂರಪ್ಪ
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ಹೋಮ ನಡೆಸಲಾಯಿತು. ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರ ಆವರಣದ ನಿಜಲಿಂಗಪ್ಪ ಸಭಾಂಗಣದಲ್ಲಿ ಹೋಮ ನಡೆಸಲಾಯಿತು. ರಾಜ್ಯ ಜಂಗಮ ಅರ್ಚಕರು ಹಾಗೂ ಪುರೋಹಿತರ ಸಂಘವು ಯಡಿಯೂರಪ್ಪ ಅಭಿಮಾನಿ ಬಳಗ ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಜಯಾದಿ ಹೋಮ ನೆರವೇರಿಸಲಾಯಿತು. ಬೆಳಗ್ಗೆ 10 ಗಂಟೆಯಿಂದ ಪ್ರಾರಂಭವಾದ ಹೋಮವು12 ಗಂಟೆಗೆ ಪೂರ್ಣಾಹುತಿಯನ್ನು ನಡೆಸುವ ಮೂಲಕ ಮುಕ್ತಾಯ ಮಾಡಲಾಯಿತು.