ಶಿರಾ ಉಪಚುನಾವಣಾ ಕ್ಷೇತ್ರದಲ್ಲೇ ಪ್ರಜ್ವಲ್ ರೇವಣ್ಣರಿಂದ ಆಯುಧಪೂಜೆ - Prajwal Revanna in Tumkur
ತುಮಕೂರು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿರೋ ಜೆಡಿಎಸ್ ಮುಖಂಡ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಶಿರಾ ತಾಲೂಕಿನ ದೊಡ್ಡಬಾಣಗೆರೆ ಗ್ರಾಮದಲ್ಲಿ ಸ್ಥಳೀಯರೊಂದಿಗೆ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜೆಡಿಎಸ್ ಪ್ರಚಾರ ವಾಹನಕ್ಕೆ ಮತ್ತು ಖಾಸಗಿ ವಾಹನಗಳಿಗೆ ಸ್ವತಃ ಕುಂಬಳಕಾಯಿ ಒಡೆದು ಪ್ರಜ್ವಲ್ ರೇವಣ್ಣ ಪೂಜೆ ಮಾಡಿದರು.ಈ ಸಂದರ್ಭದಲ್ಲಿ ಸ್ಥಳೀಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಆಯುಧ ಹಬ್ಬದ ಸಂಭ್ರಮದ ನಡುವೆಯೂ ಜೆಡಿಎಸ್ ಮುಖಂಡರು ಚುನಾವಣೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.