ಶಿವಮೊಗ್ಗ: ತಪ್ಪಿದ ಭಾರಿ ವಿದ್ಯುತ್ ಅವಘಡ - ಹೊಸನಗರ
ಶಿವಮೊಗ್ಗ: ಯುವಕರ ಸಮಯಪ್ರಜ್ಞೆಯಿಂದ ಹೊಸನಗರದಲ್ಲಿ ನಡೆಯುತ್ತಿದ್ದ ಭಾರಿ ವಿದ್ಯುತ್ ಅವಘಡವೊಂದು ತಪ್ಪಿದಂತೆ ಆಗಿದೆ. ಹೊಸನಗರದ ಗಾಯಿತ್ರಿ ಮಂದಿರದ ಎದುರಿನ ಟ್ರಾನ್ಸಫಾರ್ಮರ್ ಬಳಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಟ್ರಾನ್ಸಫಾರ್ಮರ್ ಕೆಳಗೆ ಇದ್ದ ಒಣಗಿದ ಎಲೆ, ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಅದು ಹೊಗೆಯ ರೂಪದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ, ಸಾಮರ್ಥ್ಯ ಸೌಧ ಕಚೇರಿಯ ಯುವ ಸಿಬ್ಬಂದಿ ತಕ್ಷಣ ಅಗ್ನಿಶಾಮಕದಳಕ್ಕೆ ಪೋನಾಯಿಸಿದ್ದಾರೆ. ಈ ವೇಳೆ ಹೊಸನಗರ ಪೊಲೀಸರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇದರಿಂದ ಭಾರಿ ಅನಾಹುತವೊಂದು ತಪ್ಪಿದಂತೆ ಆಗಿದೆ.