ಮನೆಗೆ ಬೆಳಕು ನೀಡೋ 'ಪವರ್ ಮ್ಯಾನ್'ಗಳ ಕಿರುಚಿತ್ರ!! - ಪವರ್ ಮ್ಯಾನ್ ಕಿರು ಚಿತ್ರ
ಕೊರೊನಾ ವೈರಸ್ ಸಂಕಷ್ಟ ಜಗತ್ತಿನಾದ್ಯಂತ ಪಸರಿಸಿದೆ. ಇದರ ಮಧ್ಯೆ ಸಾಮಾಜಿಕ ಜಾಗೃತಿಗಾಗಿ ಸರ್ಕಾರ, ಸಂಘ-ಸಂಸ್ಥೆಗಳು, ಸಾಧು ಸಂತರು, ಸಿನಿಮಾ ನಟ ನಟಿಯರು ಜಾಗೃತಿ ಮೂಡಿಸಲು ಹಲವಾರು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಅಥಣಿ ತಾಲೂಕಿನ ಕೆಲ ಯುವಕರು ಪೊಲೀಸರು, ವೈದ್ಯರು ಹಾಗೂ ಆಶಾ ಕಾರ್ಯಕರ್ತರು ಯಾವ ರೀತಿ ಕಾರ್ಯನಿರ್ವಹಿಸಿದ್ದಾರೆ ಅವರ ಕಷ್ಟದ ಬಗ್ಗೆ ಕಿರುಚಿತ್ರ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಾತ್ರವಹಿಸಿದ್ದರು. ಸದ್ಯ ನಮ್ಮ ಮನೆಗಳಲ್ಲಿ ಬೆಳಕು ನೀಡುವ ಪವರ್ ಮ್ಯಾನ್ಗಳ ಬಗ್ಗೆ ಕಿರುಚಿತ್ರ ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.