ಮುಗಿದೇ ಹೋಯ್ತು ಅಂತಿದ್ದ ಕೇಸ್ಗೆ ಮರುಜೀವ: ಹೂತಿದ್ದ ಮಕ್ಕಳ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ! - ಕೈಗೆ ಸಿಕ್ಕ ಕೀಟನಾಶಕ ಕುಡಿದು ಇಬ್ಬರು ಮಕ್ಕಳು ಸಾವು
ಕೈಗೆ ಸಿಕ್ಕ ಕೀಟನಾಶಕ ಕುಡಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಆಕಸ್ಮಿಕ ಸಾವು ಅಂತ ಪೊಲೀಸರು ದಾಖಲಿಸಿಕೊಂಡಿದ್ದ ಕೇಸ್ ಮುಚ್ಚಿಹೋಗಿತ್ತು. ಮಕ್ಕಳು ಕೀಟನಾಶಕ ಸೇವಿಸಿದ ಬಗ್ಗೆ ಜನರಲ್ಲಿ ಅನುಮಾನಗಳಿದ್ದವು. ಈಗ ತಂದೆಯೇ ದೂರು ದಾಖಲಿಸಿದ್ದಾನೆ. ಇದೇ ಕಾರಣದಿಂದ ಮಕ್ಕಳ ಶವಗಳನ್ನು ಸಮಾಧಿಯಿಂದ ಹೊರತೆಗೆದು ಶವಪರೀಕ್ಷೆ ನಡೆಸೋಕೆ ಮುಂದಾಗಿದ್ದಾರೆ.