ಭಾರತ್ ಬಂದ್ಗೆ ಉಡುಪಿ ನಗರದಲ್ಲಿ ನೀರಸ ಪ್ರತಿಕ್ರಿಯೆ - dull response in Udupi to Bharat Bandh
ಉಡುಪಿ: ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕರೆದಿರುವ ಬಂದ್ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ವಾಹನ ಓಡಾಟ, ಬಸ್ ಸಂಚಾರವಿದ್ದು, ಯಾವುದೇ ಗಲಾಟೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಒಂದೆರೆಡು ಸಂಘಟನೆಗಳು ಬಿಟ್ಟರೆ, ಬೇರೆ ಯಾವುದೇ ಸಂಘಟನೆಗಳು ಬಂದ್ಗೆ ಕರೆ ಕೊಡದೇ ಇರುವುದರಿಂದ ಜಿಲ್ಲೆಗೆ ಬಂದ್ ಬಿಸಿ ತಟ್ಟಿಲ್ಲ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.