ಶಾಲೆ ಕಟ್ಟಡ ಕಟ್ಟೋದರಲ್ಲೂ ರಾಜಕೀಯ.. ಈ ಜಟಾಪಟಿ ಬೇಕಿತ್ತಾ? - ಶಾಲೆ ಕಟ್ಟಡ ಕಟ್ಟೋದರಲ್ಲೂ ರಾಜಕೀಯ
ದೊಡ್ಡಬಳ್ಳಾಪುರ: ಮಾಜಿ ಸಂಸದೆ ಹಾಗೂ ಹಾಲಿ ಬಿಜೆಪಿ ಎಂಎಲ್‌ಸಿ ತೇಜಸ್ವಿನಿ ಶ್ರೀರಮೇಶ್ ತಮ್ಮ ಹುಟ್ಟೂರಿನಲ್ಲಿ ಶಾಲೆಯೊಂದನ್ನ ಕಟ್ಟಲು ಮುಂದಾಗಿದ್ದಾರೆ. ಆದರೆ, ಈಗ ಅದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ದಲಿತರಿಗೆ ಸೇರಿದ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪ ಬಿಜೆಪಿ ಮುಖಂಡೆ ಮೇಲೆ ಕೇಳಿ ಬಂದಿದೆ.