ಅಪ್ಪು ಅಂತ್ಯಕ್ರಿಯೆಗೆ ಸಹಕರಿಸಿದ ಸರ್ಕಾರ: ಪ್ರಮುಖ ರಾಜಕೀಯ ನಾಯಕರುಗಳು ಭಾಗಿ - ಪುನೀತ್ ರಾಜ್ಕುಮಾರ್ ಲೇಟೆಸ್ಟ್ ನ್ಯೂಸ್
ಬೆಂಗಳೂರು: ಕನ್ನಡ ಚಿತ್ರರಂಗದ 'ರಾಜಕುಮಾರ' ಪುನೀತ್ ರಾಜ್ ಕುಮಾರ್ ಅವರ ಮೃತದೇಹವನ್ನು ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಮಣ್ಣು ಮಾಡಲಾಗಿದೆ. ಅಂತ್ಯಸಂಸ್ಕಾರ ಕಾರ್ಯ ವ್ಯವಸ್ಥಿತವಾಗಿ ಈಡಿಗ ಸಂಪ್ರದಾಯದಂತೆ ನೇರವೇರಿತು. ಈ ಸಂದರ್ಭದಲ್ಲಿ ರಾಜಕೀಯ ನಾಯಕರು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಉಪಸ್ಥಿತರಿದ್ದರು. ಅಪ್ಪು ಅಂತ್ಯಕ್ರಿಯೆಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಿತ್ತು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ಸಚಿವರಾದ ಕೆ. ಗೋಪಾಲಯ್ಯ, ಆರ್.ಅಶೋಕ್, ಮುನಿರತ್ನ, ಆರಗ ಜ್ಞಾನೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖ ರಾಜಕೀಯ ನಾಯಕರುಗಳು ಉಪಸ್ಥಿತರಿದ್ದು, ಕಂಬನಿ ಮಿಡಿದರು.