ಆಯೋಧ್ಯೆ ತೀರ್ಪಿನ ಬಗ್ಗೆ ರಾಯಚೂರಿನ ರಾಜಕೀಯ ಮುಖಂಡರು, ಸ್ವಾಮೀಜಿಗಳ ಪ್ರತಿಕ್ರಿಯೆ ಇಲ್ಲಿದೆ... - Ayodhya verdict
ರಾಯಚೂರು: ನಗರದಲ್ಲಿನ ರಾಜಕೀಯ ಮುಖಂಡರು ಹಾಗೂ ಸ್ವಾಮೀಜಿಗಳು ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ್ದಾರೆ. ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಮಾತನಾಡಿ, ಈ ತೀರ್ಪು ಯಾರ ಸೋಲು, ಯಾರ ಗೆಲುವು ಅಲ್ಲ ಎಂದರು. ಇನ್ನು ಕಿಲ್ಲೇ ಬೃಹ್ಮನಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿ, ಈ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಜತೆಗೆ ಸುನ್ನಿ ವಕ್ಫ್ ಬೋರ್ಡ್ಗೂ ಸಹ 5 ಎಕರೆ ಜಾಗವನ್ನು ನೀಡುವಂತೆ ಸೂಚಿಸಿ ಸಮಭಾವ ತೋರಿದೆ. ಹೀಗಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ ಎಂದರು.
Last Updated : Nov 9, 2019, 5:11 PM IST